ಮುಂಬೈನ ಹೂಡಿಕೆದಾರರೊಬ್ಬರು ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಬೃಹತ್ ಲಾಭವನ್ನು ದೀರ್ಘಕಾಲೀನ ಬಂಡವಾಳ ಲಾಭ (LTCG) ಎಂದು ಘೋಷಿಸಿದ್ದರೂ, ಆದಾಯ ತೆರಿಗೆ ಇಲಾಖೆ ಅದನ್ನು ತಿರಸ್ಕರಿಸಿದೆ. ನಕಲಿ ಷೇರು ವಹಿವಾಟು ಮತ್ತು ಷೇರು ಬೆಲೆ ಕೃತಕ ಏರಿಕೆ (Stock manipulation) ಮಾಡಲಾಗಿದೆ ಎಂಬುದು ಇಲಾಖೆ ಆರೋಪ. ಈ ಪ್ರಕರಣವೇನು, ಷೇರುಬೆಲೆ ತಿರುಚುವ ಜಾಲ ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿವರ ಇಲ್ಲಿದೆ. ಮುಂಬೈ, ಅಕ್ಟೋಬರ್ 27: ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆಯ ಮೂಲಕ ದೊಡ್ಡ ಲಾಭ ಗಳಿಸುವುದು ಎಲ್ಲರ ಕನಸಾಗಿರುತ್ತದೆ. ಆದರೆ, ಕೆಲವೊಮ್ಮೆ ಅತಿಹೆಚ್ಚು ಮತ್ತು ಅಸಹಜ ಲಾಭವು ಹೂಡಿಕೆದಾರರನ್ನು ಆದಾಯ ತೆರಿಗೆ ಇಲಾಖೆಯ (Income Tax Department) ಕಾನೂನು ತೊಡಕುಗಳಿಗೆ ಸಿಲುಕಿಸುತ್ತದೆ.