ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಸುಮಾರು ಮೂರು ದಶಕಗಳಿಗಿಂತಲೂ ಹಳೆಯದಾದ ನೆಲಕದಿರನಹಳ್ಳಿ ಭೂಸ್ವಾಧೀನ ಪ್ರಕರಣದಲ್ಲಿ ತೀವ್ರ ವಂಚನೆ ಮತ್ತು ಕಾನೂನು ಉಲ್ಲಂಘನೆ ನಡೆದಿರುವುದನ್ನು ಸುಪ್ರೀಂ ಕೋರ್ಟ್ ಪತ್ತೆಹಚ್ಚಿ, ಜಮೀನನ್ನು ಮೂಲ ಮಾಲೀಕರಿಗೆ ಮರಳಿ ನೀಡುವಂತೆ ಮಹತ್ವದ ತೀರ್ಪು ನೀಡಿದೆ. ಬೆಂಗಳೂರು, (ಅಕ್ಟೋಬರ್ 26): ಬೆಂಗಳೂರು ಉತ್ತರ ತಾಲೂಕಿನ ನೆಲಕದಿರನಹಳ್ಳಿ ಗ್ರಾಮದ 59 ಎಕರೆ 6 ಗುಂಟೆ ಜಮೀನಿನ ಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಂಚನೆ, ಅಧಿಕಾರ ದುರ್ಬಳಕೆ ದೃಢಪಟ್ಟಿದ್ದರಿಂದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್, ಏಕಸದಸ್ಯ ಪೀಠ ನೀಡಿದ್ದ ಮೂಲ ಆದೇಶವನ್ನು ಎತ್ತಿಹಿಡಿದಿದೆ.