ಕಳೆದ ವರ್ಷವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ,3ನೇ ಹಂತದ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ಮಾಡಿದ್ರು.ಆ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು.ಆದರೆ ಕೇಂದ್ರ ಸರ್ಕಾರ ಎಂಡ್ ಟು ಎಂಡ್ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮತಿ ನೀಡದ ಹಿನ್ನೆಲೆ ಇದೀಗ ಬಿಎಂಆರ್ಸಿಎಲ್ ಕರೆದಿದ್ದ ತನ್ನ ಎಲ್ಲಾ ಸಿವಿಲ್ ಟೆಂಡರ್ ಗಳನ್ನು ರದ್ದುಗೊಳಿಸಿದೆ. ಬೆಂಗಳೂರು, (ಅಕ್ಟೋಬರ್ 26): ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32ಕಿ.ಮೀ ಹಾಗೂ ಕಡಬಗೆರೆ-ಹೊಸಹಳ್ಳಿವರೆಗೆ 12 8. ಒಟ್ಟು 44.65 ಕಿಮೀ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ನೀಡಿದೆ.