ಬ್ಲಾಕ್ಬಸ್ಟರ್ 'ಪ್ರೇಮದ ಊರಲಿ' ಸಿನಿಮಾ ಶೂಟಿಂಗ್ ಸ್ಪಾಟ್ ಸೀಗೆಗುಡ್ಡಕ್ಕೆ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಇದರಿಂದ ಹಾಸನ ಜಿಲ್ಲಾಡಳಿತಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು ದೊಡ್ಡ ಸವಾಲಾಗಿದೆ. ಮೀಸಲು ಅರಣ್ಯವಾಗಿರುವ ಕಾರಣ ಅರಣ್ಯ ಇಲಾಖೆ ನಿರ್ಬಂಧದ ಭೀತಿ ವ್ಯಕ್ತವಾಗಿದೆ. ಕಾಡು ಪ್ರಾಣಿಗಳ ರಕ್ಷಣೆ ಮತ್ತು ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಜನರಿಗೆ ಪ್ರವೇಶ ನಿಷೇಧಿಸುವ ಸಾಧ್ಯತೆಯಿದೆ. ಹಾಸನ, ಅಕ್ಟೋಬರ್ 26: ಸ್ಯಾಂಡಲ್ ವುಡ್ನಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಪ್ರೇಮದ ಊರಲಿ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬೆಳ್ಳಿ ಪರದೆಯಲ್ಲಿ ಚಿತ್ರ ನೋಡಿ ಸಂಭ್ರಮಿಸಿದ ಜನರು, ಸಿನಿಮಾ ಚಿತ್ರೀಕರಣವಾದ ಸೀಗೆಗುಡ್ಡಕ್ಕೆ ಇದೀಗ ಲಗ್ಗೆಯಿಡುತ್ತಿದ್ದು, ಹಾಸನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.