ವಯನಾಡಿನ ಕಡಿದಾದ ಅರಣ್ಯ ಗುಡ್ಡಗಾಡು ಪ್ರದೇಶದಲ್ಲಿ ಆನೆಗಳ ಹಿಂಡು ಚಲಿಸುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಮರಿ ಆನೆಯೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಮರಿ ಕೆಳಗೆ ಬಿದ್ದ ತಕ್ಷಣ ಆತಂಕಗೊಂಡ ತಾಯಿ ಆನೆ ತನ್ನ ಸೊಂಡಿಲಿನಿಂದ ಮರಿಯನ್ನು ಮೇಲಕ್ಕೆತ್ತಲು ಹಾಗೂ ಎಬ್ಬಿಸಿ ನಿಲ್ಲಿಸಲು ಸತತವಾಗಿ ಪ್ರಯತ್ನಿಸಿದೆ. ಸುಮಾರು ಗಂಟೆಗಳ ಕಾಲ ತಾಯಿ ಆನೆ ಅಸಹಾಯಕರಾಗಿ ಘೀಳಿಡುತ್ತಾ ಮರಿಯನ್ನು ರಕ್ಷಿಸಲು ಹೋರಾಟ ನಡೆಸಿತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪಶುವೈದ್ಯರ ತಂಡ, ತಾಯಿ ಆನೆಯನ್ನು ಸುರಕ್ಷಿತವಾಗಿ ಪಕ್ಕಕ್ಕೆ ಕಳುಹಿಸಿ ತೀವ್ರವಾಗಿ ಗಾಯಗೊಂಡಿದ್ದ ಮರಿ ಆನೆಗೆ ತಕ್ಷಣದ ವೈದ್ಯಕೀಯ ಉಪಚಾರ ನೀಡಲು ಮುಂದಾಯಿತು.