ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರಕರಾವಳಿ ಜಿಲ್ಲೆಯಲ್ಲಿ ನೀರು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ಪ್ರತೀ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಣೆಕಟ್ಟುಗಳ ಕಿಂಡಿಗಳನ್ನು ಮುಚ್ಚಿ ಮೇ ತಿಂಗಳಲ್ಲ. ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಣೆಕಟ್ಟುಗಳ ಕಿಂಡಿಗಳನ್ನು ಮುಚ್ಚುವ ಕಾಮಗಾರಿ ಭರದಿಂದ ಸಾಗಿದೆ. ಪರಿಣಾಮ ನದಿ ತೀರದ ಗದ್ದೆಗಳು ಮುಳುಗಡೆಯಾಗಿ ತೆನೆದೂಗಿದ್ದ ಭತ್ತದ ಪೈರು ನೆಲಕಚ್ಚಿವೆ.ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಪ್ಪೂರು ಬಳಿಯ ಹೇರೂರು ಭಾಗದಲ್ಲಿ ನದಿ ನೀರು ಹರಿದು ಬಂದ ಕಾರಣ ಭತ್ತದ ಬೆಳೆದಿದ್ದ ಗದ್ದೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಭತ್ತದ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತರ ಬದುಕು ಅತಂತ್ರವಾಗಿದೆ.