ಬೆಂಗಳೂರಿನ ಚಿಕ್ಕಪೇಟೆಯ ಪಿ.ಎಸ್. ಲೇನ್ ರಸ್ತೆಯಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಸುಮಾರು ನಾಲ್ಕೈದು ಬೈಕ್ಗಳು ಜಖಂಗೊಂಡಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋಡೆ ಕುಸಿತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ನಂತರ ನಡೆದಿರುವ ಮತ್ತೊಂದು ಗೋಡೆ ಕುಸಿತ ಇದಾಗಿದೆ. ಬೆಂಗಳೂರು, ಅಕ್ಟೋಬರ್ 26: ನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ನಂತರ ಮತ್ತೊಂದು ಗೋಡೆ ಕುಸಿತದ ಘಟನೆ ವರದಿಯಾಗಿದೆ. ಲೇನ್ ರಸ್ತೆಯಲ್ಲಿ ಕಾಂಪೌಂಡ್ ಗೋಡೆಯೊಂದು ಅನಿರೀಕ್ಷಿತವಾಗಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.