ಹಾಸನ ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ್ರವೇಶಿಸಿದ್ದು, ಬೊಗಳುತ್ತ ಆನೆಗಳನ್ನು ಸುತ್ತುವರೆದಿದೆ. ಈ ವೇಳೆ ಕಾಡಾನೆಗಳು ಜಗಳ ನಿಲ್ಲಿಸಿ ನಾಯಿ ಮೇಲೆ ದಾಳಿ ಮಾಡಲು ಮುಂದಾಗಿವೆ. ಇನ್ನು ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.