ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟದ ಮಧ್ಯೆ ಇತ್ತ ಬೀದರ್ ಕಬ್ಬು ಬೆಳೆಗಾರರೊಂದಿಗೆ ಜೆಸ್ಕಾಂ ಚೆಲ್ಲಾಟವಾಡುತ್ತಿದೆ. ಜಿಲ್ಲೆಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದ್ದು, ಈಗಾಗಲೇ ರೈತರು ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ತಕ್ಷಣ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಬೀದರ್, ಅಕ್ಟೋಬರ್ 26: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಹೇಳತೀರದಾಗಿದೆ. ವರ್ಷವಿಡಿ ಬೆಳೆದ ಕಬ್ಬಿಗೆ ಕಾರ್ಖಾನೆಗಳು ಸೂಕ್ತ ಬೆಲೆ ಕೊಡದೆ ಚೆಲ್ಲಾಟವಾಡುತ್ತಿವೆ. ಇದರ ನಡುವೆ ಶಾರ್ಟ್ ಸಕ್ಯೂರ್ಟ್ನಿಂದ ವರ್ಷಕ್ಕೆ ಹತ್ತಾರು ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗುತ್ತಿದೆ.