ಭಾರತೀಯ ಷೇರುಪೇಟೆಯನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಸೆಳೆಯಲು, ಷೇರುಗಳ ಮೇಲಿನ ಎಲ್ಟಿಸಿಜಿ (LTCG) ತೆರಿಗೆ ರಚನೆಯನ್ನು ಮುಂಬರುವ ವಾರಗಳಲ್ಲಿ ಕೇಂದ್ರ ಸರ್ಕಾರವು ಮರುಪರಿಶೀಲಿಸುವ ಸಾಧ್ಯತೆಯಿದೆ. ಸದ್ಯ, ಷೇರುಗಳ ಮಾರಾಟದಿಂದ ಬರುವ ಲಾಭದ ಮೇಲೆ ಶೇ. 12.5ರಷ್ಟು ಎಲ್ಟಿಸಿಜಿ ತೆರಿಗೆ ವಿಧಿಸಲಾಗುತ್ತಿದೆ. ನವದೆಹಲಿ, ಅಕ್ಟೋಬರ್ 26: ಭಾರತೀಯ ಷೇರು ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿಸಲು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FPIs) ನಿರಂತರ ಹೊರಹರಿವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಪ್ರಮುಖ ಹೆಜ್ಜೆಯೊಂದನ್ನು ಇಡುವ ಸಾಧ್ಯತೆಯಿದೆ.