Human Composting: ನಮ್ಮಲ್ಲಿ ಮನುಷ್ಯ ಮೃತಪಟ್ಟ ಬಳಿಕ ಅವರ ದೇಹವನ್ನು ಅಂತ್ಯಸಂಸ್ಕಾರ ಮಾಡುವುದು ಸಾಮಾನ್ಯ ಪದ್ಧತಿ. ಕೆಲವೆಡೆ ಹೂಳಿದರೆ, ಇನ್ನೂ ಕೆಲವೆಡೆ ಅಗ್ನಿಸ್ಪರ್ಶಿಸುವ ಮೂಲಕ ಸುಡುತ್ತಾರೆ. ಆದರೆ, ಭೂಮಿಗೆ ಹೂಳಿದ ದೇಹದ ಮಾಂಸ, ಮೂಳೆ ಎಲ್ಲವೂ ಕೊಳೆತು, ಆ ಮಣ್ಣಿನಲ್ಲಿ ಬೆರೆತು ಹೋಗುತ್ತವೆ. ಇದನ್ನೇ ಹೊಸ ಹಾಗೂ ವಿನೂತನ ಪ್ರಯೋಗದಡಿಯಲ್ಲಿ ಯಾಕೆ ಒಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂಬ ಆಸ್ಟ್ರೇಲಿಯಾದ ಮಹತ್ವದ ಹೆಜ್ಜೆ ಇದೀಗ ಜಾಗತಿಕವಾಗಿ ಹಲವರ ಕುತೂಹಲಕ್ಕೆ ಕಾರಣವಾಗಿದೆ.ಸತ್ತ ವ್ಯಕ್ತಿಯ ದೇಹವನ್ನೇ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ಆಸ್ಟ್ರೇಲಿಯಾ ವಿಧಾನವೊಂದು ಈಗ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.