ಹಾವೇರಿಯ ಬಂಕಾಪುರದಲ್ಲಿ 70 ಸಾವಿರ ರೂ. ಸಾಲದ ಬಡ್ಡಿ ಪಾವತಿಸಿಲ್ಲವೆಂದು ವ್ಯಕ್ತಿಯೊಬ್ಬನನ್ನು ಅಪಹರಿಸಿ, 4 ದಿನ ಕಾಲು ಕಟ್ಟಿಹಾಕಿ ಸಿಗರೇಟ್ನಿಂದ ಸುಟ್ಟು, ಬಾಯಿಗೆ ಮೂತ್ರ ಸುರಿದು ಭೀಕರ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ. ತಪ್ಪಿಸಿಕೊಂಡು ಆಸ್ಪತ್ರೆ ಸೇರಿದ ಸಂತ್ರಸ್ತ ಮಣಿಕಂಠ ನೀಡಿದ ದೂರಿನ ಮೇರೆಗೆ ನಾಲ್ವರು ಮೀಟರ್ ಬಡ್ಡಿಕೋರರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾವೇರಿ, ಅಕ್ಟೋಬರ್ 26: ಮೀಟರ್ ಬಡ್ಡಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಅಪಹರಿಸಿ, ನಾಲ್ಕು ದಿನಗಳ ಕಾಲ ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಿ ಬಾಯಿಗೆ ಮೂತ್ರ ಸುರಿದಿರುವ ಶೋಚನೀಯ ಹಾಗೂ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.