ನ್ಯೂಝಿಲೆಂಡ್ ‘ಎ’ ವಿರುದ್ಧ ಲಿಂಕನ್ನಲ್ಲಿ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 1 ರನ್ನಿಂದ ದ್ವಿಶತಕ ವಂಚಿತರಾಗಿದ್ದಾರೆ. ಭಾರತ ‘ಎ’ ತಂಡದ ಪರ ಎರಡನೇ ಇನಿಂಗ್ಸ್ನಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಪಡಿಕ್ಕಲ್, 248 ಎಸೆತಗಳಲ್ಲಿ 24 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 199 ರನ್ ಗಳಿಸಿದ್ದರು. ಆದರೆ, ದ್ವಿಶತಕದ ಹೊಸ್ತಿಲಲ್ಲಿದ್ದಾಗ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಅವರು ವಿಕೆಟ್ ಒಪ್ಪಿಸಬೇಕಾಯಿತು.