ಧನ್ವೀರ್ ಮೇಲೆ ವಿಜಯಲಕ್ಷ್ಮಿ ಅವರ ಆಪ್ತರು ಸರಣಿ ದೂರುಗಳನ್ನು ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಧನ್ವೀರ್ ಅವರ ತಂದೆ, ವಿಜಯಲಕ್ಷ್ಮಿ ಮತ್ತು ಅವರ ಕೆಲ ಸಂಗಡಿಗರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಧನ್ವೀರ್ ವಿರುದ್ಧ ಪ್ರತಿಭಟನೆ ಸಹ ನಡೆದಿದ್ದು, ಧನ್ವೀರ್ ಚಿತ್ರಕ್ಕೆ ಮಸಿ ಬಳಿಯಲಾಗಿದೆ. ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಮುನಿಸು ತಾರಕಕ್ಕೆ ಏರಿದ್ದು, ಇಬ್ಬರ ನಡುವಿನ ವೈಮನಸ್ಯ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಳೆದ ಕೆಲ ತಿಂಗಳುಗಳಿಂದಲೂ ಈ ಇಬ್ಬರ ನಡುವೆ ಮುನಿಸು ಇದ್ದೇ ಇತ್ತು. ಆದರೆ ಕಳೆದ ಕೆಲ ದಿನಗಳಿಂದ ಅದು ಬೀದಿ ಜಗಳವಾಗಿ ಮಾರ್ಪಾಡಾಗಿದೆ.