ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಅಕ್ಟೋಬರ್ 28, 2026ರಂದು ಕೊಚ್ಚಿಯಲ್ಲಿ ನಡೆಯಲಿದೆ. 27 ಖಾಲಿ ಸ್ಥಾನಗಳಿಗೆ 146 ಆಟಗಾರ್ತಿಯರು ನೋಂದಾಯಿಸಿಕೊಂಡಿದ್ದಾರೆ. ಯುಪಿ ವಾರಿಯರ್ಸ್ ಅತಿ ಹೆಚ್ಚು ಹಣ ಉಳಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ಭಾರತೀಯ ಆಟಗಾರ್ತಿಯರಿಗೆ ಆದ್ಯತೆ ನೀಡಲಿದೆ. ತಂಡಗಳ ಬಜೆಟ್, ಉಳಿದಿರುವ ಆಟಗಾರ್ತಿಯರ ಸ್ಲಾಟ್ಗಳು ಮತ್ತು ಪ್ರಮುಖ ಆಟಗಾರ್ತಿಯರ ವಿವರಗಳನ್ನು ಇಲ್ಲಿ ತಿಳಿಯಿರಿ. ಮಹಿಳಾ ಪ್ರೀಮಿಯರ್ ಲೀಗ್ನ ಮಿನಿ ಹರಾಜು ಇದೇ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಹೊಸ ಸೀಸನ್ಗೆ ತಂಡವನ್ನು ಬಲಪಡಿಸಿಕೊಳ್ಳಲು ಐದು ಫ್ರಾಂಚೈಸಿಗಳು ಸಿದ್ಧವಾಗಿವೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಯಾವ ತಂಡ ಯಾರನ್ನು ಖರೀದಿಸಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.