ಪುತ್ತೂರು: ತೆಂಕುತಿಟ್ಟು ಯಕ್ಷಗಾನದ ಮೆರುಗು ಹೆಚ್ಚಿಸುವಲ್ಲಿ ಬಣ್ಣದ ವೇಷಗಳ ಪಾತ್ರ ದೊಡ್ಡದಿದೆ. ಬಣ್ಣದ ವೇಷ ಸಿದ್ಧವಾಗುವುದಕ್ಕೆ ಶ್ರಮ ಹೆಚ್ಚಿದ್ದರೂ, ವೇದಿಕೆಯಲ್ಲಿ ಕೆಲಸ ಕಡಿಮೆ. ಸರಳ ವ್ಯಕ್ತ. ಸರಳ ವ್ಯಕ್ತಿತ್ವ ಹೊಂದಿದ ಬಣ್ಣದ ಮಹಾಲಿಂಗ ಸಜ್ಜನರಾಗಿದ್ದರು. ವೇಷಗಳ ಬಗ್ಗೆ ಬದ್ಧತೆ ಹಾಗೂ ನಿಷ್ಠೆ ಹೊಂದಿದ್ದವರು. ಅವರ ಹೆಸರಿನಲ್ಲಿ ಪ್ರತಿಷ್ಠಾನದ ಕೆಲಸ ಕಾರ್ಯ ಅನುಕರಣೀಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಜೈನ ಭವನದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸಿದ್ದರು.