ಸಾಗರ: ಜನರ ನೋವಿಗೆ ಸ್ಪಂದಿಸುವುದು, ಯಾವುದೇ ಸಮುದಾಯದ ನೋವು, ಸಂಕಷ್ಟಗಳನ್ನು ಪ್ರಾಮಾಣಿಕವಾಗಿ ರಂಗಭೂಮಿ ಮೂಲಕ ಅಭಿವ್ಯಕ್ತಿಸುವುದು ನನ್ನ ಉದ್ದೇಶ ಎಂದು ರಂಗಕರ್ಮಿ, ಹೆಗ್ಗೋಡು ನೀನಾಸಂನ ಡಾ. ಎಂ. ಎಂ.ಗಣೇಶ್ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಂತರಂಗ ಪ್ರಕಾಶನದಿಂದ ಕುಗ್ವೆ ಅಂಬಾಪುರದ ಬಹುಮುಖಿ ಆವರಣದಲ್ಲಿ ಆಯೋಜಿಸಿದ್ದ ರಂಗಸಂವಾದ, ಪುಸ್ತಕ ಬಿಡುಗಡೆ, ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಗರ, ಹೆಗ್ಗೋಡು ಸೇರಿ ವಿವಿಧೆಡೆ ನನ್ನ ರಂಗಭೂಮಿ ಕೆಲಸಗಳಿಗೆ ಅನೇಕರು ಬೆನ್ನೆಲುಬಾಗಿ ನಿಂತಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಲು ಸ್ಪಂದನ ತಂಡ ಅವಕಾಶ ನೀಡಿತು. ನಂತರ ಜನಮನದಾಟ ನಾಟಕ ತಂಡದ ಮೂಲಕವೂ ಕೆಲಸ ಮುಂದುವರಿಸಲು ಸಾಧ್ಯವಾಯಿತು.