ನವದೆಹಲಿ: ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೆಲವು ದೇಶಗಳು ಶೂನ್ಯ ಸಹಿಷ್ಣುತೆ ಪ್ರದರ್ಶಿಸದ ಕಾರಣ ಬೆದರಿಕೆ ಮುಂದುವ. ರಾಜಕೀಯ ಲಾಭಕ್ಕಾಗಿ ಅದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.ಭಾನುವಾರ(ಅ. 25) ನವದೆಹಲಿಯಲ್ಲಿ ನಡೆದ ಚಿನ್ಮಯ ಮಿಷನ್ನ 75 ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿರುವ ಅವರು, ಭಯೋತ್ಪಾದನೆಯನ್ನು ದೇಶಗಳು ತಮ್ಮ ಗುರಿಗಳನ್ನು ಸಾಧಿಸುವ ಸಾಧನವಾಗಿ ನೋಡಬಾರದು. ಮತ್ತು ಅದನ್ನು ಸಹಿಸಬಾರದು ಎಂದು ಪ್ರತಿಪಾದಿಸಿದ್ದಾರೆ.ಕೆಲವು ದೇಶಗಳು ರಾಜಕೀಯ ಕಾರಣಗಳಿಗಾಗಿ ಇತಿಹಾಸ ಕಲಿಸಿದ ಪಾಠಗಳನ್ನು ಬದಿಗಿಡುತ್ತಿವೆ. ಅಂತರರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವನ್ನು ಅಳವಡಿಸಿಕೊಳ್ಳಬೇಕು, ಅದರ ಸ್ವರೂಪ ಏನೇ ಇರಲಿ ಎಂದು ಹೇಳಿದ್ದಾರೆ..