ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಸಹಜ ಗುಣ. ಸಹಾಯ ಮಾಡುವುದು ತಪ್ಪಲ್ಲ, ಆದರೆ ಕಣ್ಣು ಮುಚ್ಚಿ ಎಲ್ಲರಿಗೂ ಸಹಾಯ ಮಾಡುವುದು ದೊಡ್ಡ ತಪ್ಪು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇವರ ಪ್ರಕಾರ ನಾವು ಒಂದಿಷ್ಟು ಜನರಿಗೆ ಯಾವುದೇ ಕಾರಣಕ್ಕೂ ಹೆಲ್ಪ್ ಮಾಡ್ಬಾರ್ದು. ಯಾಕಂದ್ರೆ ಇದರಿಂದ ಕೊನೆಗೆ ನಾವೇ ಕಷ್ಟ ಅನುಭವಿಸಬೇಕಾಗುತ್ತದೆ. ಹಾಗಿದ್ರೆ ಯಾರಿಗೆಲ್ಲಾ ಸಹಾಯ ಮಾಡೋದು ತಪ್ಪು ಎಂಬುದನ್ನು ನೋಡೋಣ ಬನ್ನಿ. ಸಹಾಯ (help) ಮನೋಭಾವ ಮನುಷ್ಯನಲ್ಲಿರುವ ಸದ್ಗುಣಗಳಲ್ಲಿ ಒಂದು. ಕಷ್ಟ ಎಂದು ಬಂದ ವ್ಯಕ್ತಿಗೆ ಮಾತ್ರವಲ್ಲ, ನೋವಿನಲ್ಲಿರುವ ಪ್ರಾಣಿ ಪಕ್ಷಿಗಳಂತಹ ಮುಗ್ಧ ಜೀವಿಗಳಿಗೂ ಸಹಾಯ ಮಾಡುವ ಅನೇಕರಿದ್ದಾರೆ.