ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಂದೆ ತಾಯಿಗೆ ಪುಟ್ಟ ಮಕ್ಕಳೇ. ಇದಕ್ಕೆ ಸಾಕ್ಷಿ ಆಗುವ ದೃಶ್ಯಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವಿದೇಶದಲ್ಲಿ ನೆಲೆಸಿರುವ ಮಗಳಿಗೆ ತಂದೆ ತಾಯಿ ದೀಪಾವಳಿಯ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಓದು, ಉದ್ಯೋಗ ಎಂದು ದೂರದ ಊರಿಗೆ ಮಕ್ಕಳು ತೆರಳುವಾಗ ಹೆತ್ತವರು ಕಣ್ಣೀರು ಹಾಕುತ್ತಾರೆ. ಇದೆಲ್ಲದರ ನಡುವೆ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುವುದು ಸಹಜ. ಹೀಗಾಗಿ ತಂದೆ ತಾಯಿಯ (parents) ಪ್ರೀತಿಗೆ ಸರಿಸಾಟಿಯಿಲ್ಲ. ವಿದೇಶದಲ್ಲಿ ನೆಲೆಸಿರುವ ಮಗಳಿಗೆ ಹೆತ್ತವರು ದೀಪಾವಳಿಗೆ ಸರ್ಪ್ರೈಸ್ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.