ಟೈಗರ್ ಶ್ರಾಫ್ ಮೇಲೆ ದಾಳಿ ನಡೆದ, 15 ಗಂಟೆಗಳ ಅವಧಿಯಲ್ಲಿಯೇ ಮೂವರು ಶೂಟರ್ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆದರು. ಆ ಬಳಿಕ ಶೂಟರ್ಗಳಿಗೆ ಪ್ರತ್ಯಕ್ಷವಾಗಿ ಸಹಾಯ ಮಾಡಿದ ನಾಲ್ವರನ್ನು ದೆಹಲಿ, ಹರಿಯಾಣಗಳಿಂದ ಪೊಲೀಸರು ಬಂಧಿಸಿದರು. ಆ ಬಳಿಕ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದು, ಈ ವರೆಗೆ ಒಟ್ಟು 11 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅವರ ವಿವರ ಇಲ್ಲಿದೆ... ಬಾಲಿವುಡ್ನ ಸ್ಟಾರ್ ಯುವನಟ ಟೈಗರ್ ಶ್ರಾಫ್ ಹತ್ಯೆ ಯತ್ನಕ್ಕೆ ಕುರಿತಂತೆ ಮುಂಬೈ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದು, ಈಗಾಗಲೇ 11 ಮಂದಿಯನ್ನು ಬಂಧಿಸಿದ್ದಾರೆ. ಘಟನೆ ನಡೆದ 15 ಗಂಟೆಗಳ ಅವಧಿಯಲ್ಲಿಯೇ ಮೂವರು ಶೂಟರ್ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆದರು.