ದೀಪ್ತಿ ಶರ್ಮಾ 9 ವರ್ಷಗಳ ನಂತರ ತಮ್ಮ ಎರಡನೇ ಏಕದಿನ ಶತಕ ದಾಖಲಿಸಿದ್ದಾರೆ. ಜಿಂಬಾಬ್ವೆ ವಿರುದ್ಧ 106 ರನ್ ಗಳಿಸಿದ ಅವರು, ಆರನೇ ಕ್ರಮಾಂಕದಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು. ಇದು ಭಾರತದ ಪರ ಐದನೇ ವೇಗದ ಶತಕವಾಗಿದ್ದು, ಅವರ ವೃತ್ತಿಜೀವನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ ಅವರ ಶತಕದ ಬರ ಕೊನೆಗೂ ನೀಗಿದೆ. ಕಳೆದ 12 ವರ್ಷಗಳಿಂದ ಟೀಂ ಇಂಡಿಯಾ ಪರ ಆಡುತ್ತಿರುವ ದೀಪ್ತಿ, ತಮ್ಮ ವೃತ್ತಿಜೀವನದಲ್ಲಿ ಹಲವು ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದಾರೆ.