ಭೂಕಂಪನ ರಹಿತ ಹಾಗೂ ಅಂತಾರಾಷ್ಟ್ರೀಯ ಗಡಿಗಳಿಂದ ದೂರವಿರುವ ಭೌಗೋಳಿಕವಾಗಿ ಸುರಕ್ಷಿತ ಪ್ರದೇಶವಾದ ಜಟಣಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದ್ದು, ನೈಸರ್ಗಿಕ ವಿಕೋಪಗಳು ಮತ್ತು ಭೌಗೋಳಿಕ ಸವಾಲುಗಳಿಂದ ಡೇಟಾಗೆ ಯಾವುದೇ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಡೇಟಾ ಸೆಂಟರ್ ಆರ್ಬಿಐನ ಪ್ರಮುಖ ಪಾವತಿ ವ್ಯವಸ್ಥೆಗಳು ಸೇರಿದಂತೆ ಅತ್ಯಂತ ನಿರ್ಣಾಯಕ ಹಣಕಾಸು ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ಬೆಂಬಲ ನೀಡಲಿದೆ. ಭುವನೇಶ್ವರ, ಅಕ್ಟೋಬರ್ 25: ಒಡಿಶಾದ ಭುವನೇಶ್ವರದ ಜಟಣಿ (ಇನ್ಫೋ ವ್ಯಾಲಿ-II) ಪ್ರದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.