ಸಾಮಾನ್ಯವಾಗಿ ಆನ್ಲೈನ್ನಲ್ಲಿ ಪ್ರಾಡಕ್ಟ್ ಆರ್ಡರ್ ಮಾಡುತ್ತೇವೆ. ಆದರೆ ಇದೀಗ ವ್ಯಕ್ತಿಯೊಬ್ಬನಿಗೆ ಪಾರ್ಸೆಲ್ನಲ್ಲಿ ಅಚ್ಚರಿಯ ಚೀಟಿಯೊಂದು ಸಿಕ್ಕಿದೆ. ಹೌದು, ಮಾರಾಟಗಾರನು ಗ್ರಾಹಕನೊಬ್ಬನಿಗೆ ಟೀ ಶರ್ಟ್ ಪಾರ್ಸೆಲ್ನೊಳಗೆ ಚೀಟಿ ಬರೆದು ದಯವಿಟ್ಟು ಇದನ್ನು ಹಿಂತಿರುಗಿಸಬೇಡಿ ಎಂದು ಮನವಿ ಮಾಡಿದ್ದಾನೆ. ಈ ಚೀಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ತಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ಕೆಲವೊಮ್ಮೆ ಪ್ರಾಡಕ್ಟ್ ಇಷ್ಟವಾಗದೇ ಇದ್ರೆ ಅಥವಾ ಆರ್ಡರ್ ಮಾಡಿದಾಗ ಪ್ರಾಡಕ್ಟ್ ಅಲ್ಲದೇ ಹೋದ್ರೆ ರಿಟರ್ನ್ ಮಾಡುತ್ತೇವೆ. ಆದರೆ ಇದೀಗ ಫ್ಲಿಪ್ಕಾರ್ಟ್ ನಲ್ಲಿ (Flipkart) ವ್ಯಕ್ತಿಯೊಬ್ಬ ಟಿ ಶರ್ಟ್ ಆರ್ಡರ್ ಮಾಡಿದ್ದಾನೆ.