ಭರಮಸಾಗರ: ಬರದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ, ಬೆಳೆಗೆ ಬೆಂಬಲ ಬೆಲೆ ಇಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳು ಲಭ್ಯವಿಲ್ಲ ಎಂದು ತೀವ್ರ ಅಸಮಾಧಾನ. ಸಿಎಂ ರೈತರಿಗೆ ಬರ ಪರಿಹಾರವಾಗಿ 2,500 ರೂ. ನೀಡುವುದಾಗಿ ಹೇಳಿದ್ದರೂ, ಈ ಮೊತ್ತ ಇಂದಿನ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಸಾಲದು. ಒಂದು ಚೀಲ ಗೊಬ್ಬರದ ಬೆಲೆ 2,800 ರೂ. ಆಗಿರುವಾಗ, ಬೀಜ, ಗೊಬ್ಬರ, ಕೂಲಿ ಹಾಗೂ ಇತರ ಕೃಷಿ ವೆಚ್ಚ ಹೇಗೆ ಭರಿಸಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತ ವಿಳಂಬವಿಲ್ಲದೆ ಪಾವತಿಸುವ ಜತೆಗೆ ಮೊತ್ತ ಹೆಚ್ಚಿಸಬೇಕು. ಮಳೆ ಕೊರತೆಯಿಂದ ಈಗಾಗಲೇ ಬೆಳೆ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.