Sao Paulo Metro Disaster: ದಕ್ಷಿಣ ಅಮೆರಿಕದ ಪ್ರಸಿದ್ಧ ಸಾವೊ ಪಾಲೊ ನಗರದಲ್ಲಿ ಭೀಕರ ಮೆಟ್ರೋ ದುರಂತ ನಡೆದಿದೆ. ಹಳಿಯ ಮೇಲೆ ಬಿದ್ದಿದ್ದ ಬೃಹತ್ ನಿರ್ಮಾಣ ಕ್ರೇನ್ಗೆ ಚಾಲಕರಹಿತ (Driverless. ಹಳಿಯ ಪಕ್ಕದ ಖಾಸಗಿ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಮೊನೊರೈಲ್ ಹಳಿಯ ಮೇಲೆ ಬಿದ್ದಿದೆ. ರೈಲು ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದರಿಂದ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಲಾಗದೆ, ಹಳಿಯಲ್ಲಿದ್ದ ಕ್ರೇನ್ಗೆ ನೇರವಾಗಿ ಡಿಕ್ಕಿಯಾಗಿದೆ.ತುಂಡಾಗಿ ಕೆಳಗೆ ಬಿದ್ದ ಕ್ರೇನ್ಮೆಟ್ರೋ ಡಿಕ್ಕಿಯಾದ ರಭಸಕ್ಕೆ ಕ್ರೇನ್ ತುಂಡಾಗಿ ಕೆಳಗಿನ ರಸ್ತೆಗೆ ಬಿದ್ದಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಪವಾಡಸಾದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ. ಆದರೆ ಗಾಯಗೊಂಡಿರುವ ಕ್ರೇನ್ ಆಪರೇಟರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ..