* ಅಧ್ಯಕ್ಷ ಧೀರಜ ಎನ್. ಶಾಂತಿ ಹೇಳಿಕೆ* ಉಡುಪಿ ರೈಲ್ವೆ ಯಾತ್ರಿ ಸಂಘದ ಮಹಾಸಭೆಉಡುಪಿ: ಭಾರತದಲ್ಲಿ ರೈಲು ಸಂಪರ್ಕ ಆರಂಭಗೊಂಡ ಶತಮಾನದ ಬಳಿಕ ಉಡುಪಿಗೆ ರೈಲ್ವೆ ಸಂಪರ್ಕಗಳ ಸೌಭಾಗ್ಯ ದೊರೆತಿದೆ. ಆದ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿರುವ ಉನ್ನತ ರೈಲ್ವೆ ನಿಲ್ದಾಣಗಳಂತೆಯೇ ಗುಣಮಟ್ಟ ಹೊಂದುವಲ್ಲಿ ಸಾಕಷ್ಟು ಆಶಾದಾಯಕ ಪ್ರಯತ್ನ ನಡೆದಿರುವುದು ಸಮಾಧಾನಕರ ವಿಷಯ. ಅಮೃತ ಯೋಜನೆಯಂತಹ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಘದ ಹೋರಾಟ ನಿರಂತರವಾಗಿರುತ್ತದೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ ಎನ್. ಶಾಂತಿ ತಿಳಿಸಿದರು.