ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರವಾದ FSSAI ವಿರುದ್ಧ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಕೇಂದ್ರ ಪರವಾನಗಿ ಹೊಂದಿರುವ ಕಂಪನಿಗಳ ತಪಾಸಣೆಯಿಂದ ರಾಜ್ಯ ಅಧಿಕಾರಿಗಳನ್ನು ತಡೆದಿರುವುದನ್ನು ಪ್ರಶ್ನಿಸಿ, ತಪಾಸಣೆ ಅಧಿಕಾರಕ್ಕಾಗಿ ಕಾನೂನು ಸಮರ ಆರಂಭಿಸಿದೆ. ಎಫ್ಎಸ್ಎಐ ಅಕ್ರಮವಾದ ಪ್ಯಾರಲಲ್ ಸಿಸ್ಟಂ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ಆರೋಪಿಸಿದೆ. ನವದೆಹಲಿ, ಅಕ್ಟೋಬರ್ 25: ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನಿಯಮಗಳ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಹೈಕೋರ್ಟ್ ಮೆಟ್ಟಿಲೇರಿದೆ.